JavaScript must be enabled in order for you to use the Site in standard view. However, it seems JavaScript is either disabled or not supported by your browser. To use standard view, enable JavaScript by changing your browser options.

| Last Updated:13/05/2019

Latest News

Archive

ವಾಯು ಮಾಲಿನ್ಯಕ್ಕೆ ವರ್ಷದಲ್ಲಿ 12 ಲಕ್ಷ ಮಂದಿ ಬಲಿ

 

ಇದೇ ಪ್ರಮಾಣದಲ್ಲಿ ವಾಯು ಮಾಲಿನ್ಯ ಮುಂದುವರಿದರೆ, ದಕ್ಷಿಣ ಏಷ್ಯಾದಲ್ಲಿ ಹುಟ್ಟುವ ಮಗುವಿನ ಆಯಸ್ಸು 2 ವರ್ಷ 6 ತಿಂಗಳು ಕಡಿಮೆಯಾಗುತ್ತದೆ ಎಂಬ ಆಘಾತಕಾರಿ ಅಂಶದ ಬಗ್ಗೆಯೂ ವರದಿ ಬೆಳಕು ಚೆಲ್ಲಿದೆ.

ಹೊಸದಿಲ್ಲಿ: ಭಾರತದಲ್ಲಿ ವಾಯು ಮಾಲಿನ್ಯದಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, 2017ನೇ ಸಾಲನಲ್ಲಿ 12 ಲಕ್ಷ ಮಂದಿ ಅವಧಿಗೆ ಮುನ್ನವೇ ಮೃತಪಟ್ಟಿದ್ದಾರೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

ಇದೇ ಪ್ರಮಾಣದಲ್ಲಿ ವಾಯು ಮಾಲಿನ್ಯ ಮುಂದುವರಿದರೆ, ದಕ್ಷಿಣ ಏಷ್ಯಾದಲ್ಲಿ ಹುಟ್ಟುವ ಮಗುವಿನ ಆಯಸ್ಸು 2 ವರ್ಷ 6 ತಿಂಗಳು ಕಡಿಮೆಯಾಗುತ್ತದೆ ಎಂಬ ಆಘಾತಕಾರಿ ಅಂಶದ ಬಗ್ಗೆಯೂ ವರದಿ ಬೆಳಕು ಚೆಲ್ಲಿದೆ.

ಅಮೆರಿಕ ಮೂಲದ ಹೆಲ್ತಎಫೆಕ್ಟ್ ಸಂಸ್ಥೆಯ ಬಿಡುಗಡೆ ಮಾಡಿರುವ 'ದಿ ಸ್ಟೇಟ್ಆಫ್ಗ್ಲೋಬಲ್ಏರ್‌ -2019' ಪ್ರಕಾರ ಭಾರತದಲ್ಲಿ ಅಪೌಷ್ಠಿಕತೆ, ಕುಡಿತ, ದೈಹಿಕ ನಿಷ್ಕ್ರಿಯತೆ ಇತ್ಯಾದಿ ಹತ್ತು ಹಲವು ಸಮಸ್ಯೆಗಳಿಂದ ಸಾಯುವವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಾಯುಮಾಲೀನ್ಯಕ್ಕೆ ಬಲಿಯಾಗುತ್ತಿದ್ದಾರೆ.

ಹೊರಾಂಗಣದಲ್ಲಿ ಅಥವಾ ಒಳಾಂಗಣದಲ್ಲಿ ಸತತ ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಮಧುಮೇಹ, ಹೃದಯಾಘಾತ, ಶ್ವಾಸಕೋಶ ಕ್ಯಾನ್ಸರ್ಮತ್ತು ಇತರೆ ಶ್ವಾಸ ಸಂಬಂಧಿ ದೀರ್ಘಕಾಲೀನ ಸಮಸ್ಯೆಗಳಿಂದ 5 ಲಕ್ಷ ಜನರು ಮೃತಪಟ್ಟಿದ್ದಾರೆ.

ಸರಕಾರದ ಯೋಜನೆಗಳಿಂದ ಪ್ರಯೋಜನ?

ಮಾಲಿನ್ಯ ನಿಯಂತ್ರಣಕ್ಕಾಗಿ ಸರಕಾರ ಕೈಗೊಂಡಿರುವ ಪ್ರಧಾನ ಮಂತ್ರಿ ಉಜ್ವಲ ಯೋಜನಾ (ಉಚಿತ ಎಲ್ಪಿಜಿ ವಿತರಣೆ), ಭಾರತ್‌ 6 ವಾಹನ ಮಾನದಂಡ ಮತ್ತು ರಾಷ್ಟ್ರೀಯ ಸ್ವಚ್ಛ ಗಾಳಿ ಕಾರ್ಯಕ್ರಮದಂತಹ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಿದರೆ ಭವಿಷ್ಯದಲ್ಲಿ ಫಲಿತಾಂಶವು ಪರಿಣಾಮಕಾರಿಯಾಗಲಿದೆ. ಮಾಲಿನ್ಯ ಮತ್ತು ಜನರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.

Source:https://vijaykarnataka.indiatimes.com/news/india/over-1-2-million-early-deaths-in-india-in-2017-due-to-air-pollution-says-report-bindu-shajan-perappadan/articleshow/68708965.cms