JavaScript must be enabled in order for you to use the Site in standard view. However, it seems JavaScript is either disabled or not supported by your browser. To use standard view, enable JavaScript by changing your browser options.

| Last Updated:13/05/2019

Latest News

Archive

ಈ ಬಾರಿ ವಾಡಿಕೆಗಿಂತಲೂ ಕಡಿಮೆ ಮಳೆ

 

ವರ್ಷ ಮುಂಗಾರು ಮಳೆಯ ದೀರ್ಘಾವಧಿ ಸರಾಸರಿ (ಎಲ್ಪಿಎ) 93% ರಷ್ಟು ಇರಲಿದೆ. ಈಶಾನ್ಯ ಭಾರತದ ಜತೆಗೆ ಮಧ್ಯ ಭಾರತದಲ್ಲಿ ಮಳೆ ಕೊರತೆ ಎದುರಾಗಲಿದ್ದು, ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.

ಹೊಸದಿಲ್ಲಿ: ಭರ್ಜರಿ ಮುಂಗಾರು ಎದುರು ನೋಡುತ್ತಿರುವ ರೈತರಿಗೆ ಬಾರಿ ನಿರಾಸೆಯಾಗುವ ಸಾಧ್ಯತೆಗಳಿವೆ. ದೇಶದಲ್ಲಿ ವರ್ಷ ಮುಂಗಾರು ಮಳೆ ವಾಡಿಕೆಗಿಂತಲೂ ಕಡಿಮೆ ಇರಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೆ ೖಮೇಟ್ಅಂದಾಜಿಸಿದೆ.

ವರ್ಷ ಮುಂಗಾರು ಮಳೆಯ ದೀರ್ಘಾವಧಿ ಸರಾಸರಿ (ಎಲ್ಪಿಎ) 93% ರಷ್ಟು ಇರಲಿದೆ. ಈಶಾನ್ಯ ಭಾರತದ ಜತೆಗೆ ಮಧ್ಯ ಭಾರತದಲ್ಲಿ ಮಳೆ ಕೊರತೆ ಎದುರಾಗಲಿದ್ದು, ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಜೂನ್‌-ಆಗಸ್ಟ್ವರೆಗೆ ಒಳ್ಳೆಯ ಮಳೆ ಬೀಳುವ ನಿರೀಕ್ಷೆಗಳಿಲ್ಲ. ಸೆಪ್ಟೆಂಬರ್ನಂತರ ಪರಿಸ್ಥಿತಿ ಸುಧಾರಿಸಲಿದೆ ಎಂದು ಭವಿಷ್ಯ ನುಡಿದಿದೆ.
ಶೇಕಡ 90ರಿಂದ 95 ನಡುವಿನ ಎಲ್ಪಿಎ (ದೀರ್ಘಾವಧಿ ಸರಾಸರಿ) ಮಳೆ ಪ್ರಮಾಣವನ್ನು ವಾಡಿಕೆಗಿಂತಲೂ ಕಡಿಮೆ ಎಂದು ಪರಿಗಣಿಸಲಾಗುತ್ತದೆ. ಜಾಗತಿಕ ತಾಪಮಾನದ ಏರುಪೇರಿನಿಂದ ಉಂಟಾಗುವ ಎಲ್ನಿನೋ ವಿದ್ಯಮಾನದಿಂದ ವಾಡಿಕೆಗಿಂತಲೂ ಕಡಿಮೆ ಮಳೆಯಾಗುವ ಪ್ರಮಾಣ ಶೇಕಡ 55ರಷ್ಟು ಸಾಧ್ಯತೆ ಇದೆ ಎಂದು ಸ್ಕೈಮೇಟ್ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜತಿನ್ಸಿಂಗ್ಹೇಳಿದ್ದಾರೆ.

Source:https://vijaykarnataka.indiatimes.com/news/india/monsoon-likely-to-be-below-normal-this-year-skymet/articleshow/68710575.cms