JavaScript must be enabled in order for you to use the Site in standard view. However, it seems JavaScript is either disabled or not supported by your browser. To use standard view, enable JavaScript by changing your browser options.

| Last Updated::20/08/2022

Major Activity

Archive

ವಾಯುಮಾಲಿನ್ಯದಿಂದ ಭಾರತೀಯರ ಆಯಸ್ಸು 5 ವರ್ಷ ಕಡಿಮೆಯಾಗುವ ಅಪಾಯ

 

ನವದೆಹಲಿ: ‘ಭಾರತದಲ್ಲಿ ವಾಯು ಮಾಲಿನ್ಯ ಜನರ ಆರೋಗ್ಯಕ್ಕೆ ಭಾರಿ ಅಪಾಯವನ್ನೊಡ್ಡಿದೆ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್) ಮಾರ್ಗಸೂಚಿಗಳನ್ನು ಅನುಸರಿಸದೇ ಇದ್ದಲ್ಲಿ ಭಾರತೀಯನ ಆಯಸ್ಸಿನಲ್ಲಿ ಸರಾಸರಿ ಐದು ವರ್ಷ ಕಡಿಮೆಯಾಗಲಿದೆಎಂದು ಅಧ್ಯಯನ ವರದಿಯೊಂದು ಎಚ್ಚರಿಸಿದೆ.

ಅದರಲ್ಲೂ, ವಿಶ್ವದಲ್ಲಿ ಅತಿ ಹೆಚ್ಚು ಮಾಲಿನ್ಯವಿರುವ ನಗರದಲ್ಲೊಂದಾಗಿರುವ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಇದೇ ರೀತಿ ಮುಂದುವರಿದಲ್ಲಿ, ನಗರದ ನಿವಾಸಿಗಳ ಆಯಸ್ಸಿನಲ್ಲಿ 10 ವರ್ಷ ಕಡಿಮೆಯಾಗುವ ಅಪಾಯ ಇದೆ ಎಂದು ಇದೇ ಅಧ್ಯಯನ ಹೇಳಿದೆ.

ಅಮೆರಿಕದ ಷಿಕಾಗೊ ವಿಶ್ವವಿದ್ಯಾಲಯದಎನರ್ಜಿ ಪಾಲಿಸಿ ಇನ್ಸ್ಟಿಟ್ಯೂಟ್ಮಂಗಳವಾರ ಬಿಡುಗಡೆ ಮಾಡಿರುವವಾಯು ಗುಣಮಟ್ಟ ಜೀವನಶೈಲಿ ಸೂಚ್ಯಂಕದಲ್ಲಿ (ಎಕ್ಯೂಎಲ್) ಕುರಿತು ವಿವರಿಸಲಾಗಿದೆ.

ದೆಹಲಿಯ ಗಾಳಿಯಲ್ಲಿ, ಮಾಲಿನ್ಯಕಾರಕಪಿಎಂ 2.5’ ಮಟ್ಟ ಪ್ರತಿ ಘನ ಮೀಟರ್ಗೆ 107 ಮೈಕ್ರೊಗ್ರಾಮ್ಗಳಿಗಿಂತಲೂ ಅಧಿಕ ಇದೆ. ಇದರ ಪ್ರಮಾಣ ಡಬ್ಲ್ಯುಎಚ್ ಮಾರ್ಗಸೂಚಿ ನಿಗದಿಪಡಿಸಿರುವ ಮಟ್ಟಕ್ಕಿಂತಲೂ 21 ಪಟ್ಟು ಹೆಚ್ಚಾಗಿದ್ದು, ಇದು ದೆಹಲಿ ನಿವಾಸಿಗಳ ಆಯಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಉತ್ತರಭಾರತದಲ್ಲಿ ಅಂದಾಜು 51 ಕೋಟಿ ಜನರು ವಾಸಿಸುತ್ತಿದ್ದು, ಪ್ರದೇಶ ಅತಿಹೆಚ್ಚು ಮಾಲಿನ್ಯಗೊಂಡಿದೆ. ಪ್ರದೇಶದ ಜನರು ತಮ್ಮ ಆಯಸ್ಸಲ್ಲಿ 7.6 ವರ್ಷಗಳಷ್ಟು ಕಡಿಮೆಯಾಗುವ ಅಪಾಯವನ್ನು ಎದುರಿಸುತ್ತಿದ್ದಾರೆ.

ಒಂದು ವೇಳೆ, ಡಬ್ಲ್ಯುಎಚ್ ಮಾನದಂಡಗಳಂತೆ ಮಾಲಿನ್ಯಕಾರಕಗಳ ಪ್ರಮಾಣವನ್ನು (ಪಿಎಂ2.5) ನಿರ್ವಹಣೆ ಮಾಡಿದಲ್ಲಿ, ಉತ್ತರಪ್ರದೇಶದ ನಿವಾಸಿಗಳ ಆಯಸ್ಸು 8.2 ವರ್ಷ ಹೆಚ್ಚಳವಾಗಬಹುದು. ಬಿಹಾರದಲ್ಲಿ 7.9 ವರ್ಷ, ಪಶ್ಚಿಮ ಬಂಗಾಳ–5.9 ವರ್ಷಗಳು ಹಾಗೂ ರಾಜಸ್ಥಾನ ನಿವಾಸಿಗಳ ಆಯಸ್ಸು 4.8 ವರ್ಷಗಳಷ್ಟು ಹೆಚ್ಚಳವಾಗಬಹುದು ಎಂದೂ ವರದಿಯಲ್ಲಿ ಹೇಳಲಾಗಿದೆ.

ಪ್ರಮುಖ ಅಂಶಗಳು

* ಡಬ್ಲ್ಯುಎಚ್ ಮಾರ್ಗಸೂಚಿ ಪ್ರಕಾರ, ಮಾಲಿನ್ಯಕಾರಕಪಿಎಂ2.5’ ಪ್ರಮಾಣ ಪ್ರತಿ ಘನ ಮೀಟರ್ಗಾಳಿಯಲ್ಲಿ 5 ಮೈಕ್ರೊಗ್ರಾಮ್ಗಳಿಗಿಂತ ಹೆಚ್ಚು ಇರಬಾರದು

* ಜಾಗತಿಕವಾಗಿ ವಾಯು ಮಾಲಿನ್ಯವು ವ್ಯಕ್ತಿಯ ಆಯಸ್ಸನ್ನು 2.2 ವರ್ಷಗಳಷ್ಟು ಕಡಿಮೆ ಮಾಡುತ್ತದೆ

* ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ಕೈಗಾರಿಕೆಗಳು ಹಾಗೂ ಜನಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರಿಂದ ಪಳೆಯುಳಿಕೆ ಇಂಧನಗಳ ಬಳಕೆ ಹೆಚ್ಚಿದೆ. ಇದು ವಾಯು ಮಾಲಿನ್ಯ ಹೆಚ್ಚಾಗಲು ಕಾರಣ

Source: https://www.prajavani.net/environment/pollution/air-pollution-reducing-life-expectancy-by-5-yrs-in-india-people-in-delhi-stand-to-lose-10-yrs-study-945295.html